Current Date 09 May, 2026

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿಮಾನಿಗಳಿಗೆ ಸಿಕ್ತು ಸ್ವೀಟ್ ನ್ಯೂಸ್


ವರ್ಷದ 6 ತಿಂಗಳು ಕಳೆದರೂ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಟರ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ದೊಡ್ಡ ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಘೋಷಣೆಗೆ ಇನ್ನು ಮೀನಾಮೇಷ ಎಣಿಸುತ್ತಿದ್ದಾರೆ. 'ಮಾರ್ಟಿನ್', 'ಭೀಮ' ಚಿತ್ರಗಳು ಯಾವಾಗ ಬರುತ್ತದೆ ಎನ್ನುವುದು ಮಾತ್ರ ಖಚಿತವಾಗಿದೆ.
'ಯುಐ', 'ಬೈರತಿ ರಣಗಲ್' ಹಾಗೂ 'ಮ್ಯಾಕ್ಸ್' ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಆಗಬೇಕಿದೆ. ಈ ಐದು ಸಿನಿಮಾಗಳ ಜೊತೆಗೆ ಈ ವರ್ಷ ಮತ್ತೊಂದಷ್ಟು ಸಿನಿಮಾಗಳು ಕುತೂಹಲ ಮೂಡಿಸಿವೆ. ಈ ಪಟ್ಟಿಯಲ್ಲಿ 'ಉತ್ತರಕಾಂಡ', 'ಪೆಪೆ', 'ಬಘೀರ' ಸಿನಿಮಾಗಳೂ ಇವೆ. ಬಹಳ ಹಿಂದೆ ಶುರುವಾದ 'ಬಘೀರ' ಸಿನಿಮಾ ಚಿತ್ರೀಕರಣ ಕೊನೆಗೂ ಮುಕ್ತಾಯವಾಗಿದೆ. ಡಾ. ಸೂರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.